ಬೆಂಗಳೂರು ಸುತ್ತಮುತ್ತಲಿನ ಪುರ ಮತ್ತು ಪಟ್ಟಣಗಳಿಗೆ ಈಗಾಗಲೇ ಇರುವ ರೈಲುಹಳಿಗಳನ್ನು ಉಪಯೋಗಿಸಿಕೊಂಡು ಸಂಪರ್ಕ ಕಲ್ಪಿಸುವ ವ್ಯವಸ್ಥೆಯೇ ಬೆಂಗಳೂರು ಉಪನಗರ ರೈಲು ಸೇವೆ. ಉಪನಗರ ರೈಲಿನ ಸೇವೆಯನ್ನು ಬೆಂಗಳೂರಿನಲ್ಲಿ ಆರಂಭಿಸಬೇಕೆಂದು ಬಹಳ ದಿನಗಳಿಂದ ಬೇಡಿಕೆಯಿದೆ. ಈ ರೈಲು ಸೇವೆಯನ್ನು ಒಂದು ಪ್ರತ್ಯೇಕ ಸಂಸ್ಥೆ ಯು ನಡೆಸಬೇಕೆಂದು ನಿರ್ಧರಿತವಾಗಿ, ಅದಕ್ಕಾಗಿ ಬೆಂಗಳೂರು ಉಪನಗರ ರೈಲು ನಿಗಮ ಸ್ಥಾಪಿಸಲಾಗಿದೆ. ೪೦೫ ಕಿಲೋಮೀಟರನಷ್ಟು ಹಳಿಗಳನ್ನೊಳಗೊಂಡ ಈ ಯೋಜನೆಯನ್ನು ಮೂರು ಹಂತಗಳಲ್ಲಿ ಅನುಷ್ಠಾನಗೊಳಿಸಲಾಗುವುದು: ಹಂತ ೧ ಹಂತ ೨ ಹಂತ ೩ == ಇತಿಹಾಸ == ೧೯೬೩ - ಹಿಂದುಸ್ತಾನ ಏರೋನಾಟಿಕ್ಸ್ ನಿಯಮಿತದ ಕಾರ್ಮಿಕರಿಗಾಗಿ ನಗರದಿಂದ ವಿಮಾನಪುರ ರೈಲು ನಿಲ್ದಾಣಕ್ಕೆ ರೈಲು ಸಂಚಾರ ವ್ಯವಸ್ಥೆಯಿದ್ದಿತು. ೧೯೮೩– ದಕ್ಷಿಣ ರೈಲ್ವೆಯ ತಂಡ ೫೮ ಕಿಲೋಮೀಟರ್ ಉದ್ದದ ಮೂರು ಪ್ರಯಾಣಿಕ ವರ್ತುಲ ರೈಲು ಹಳಿಗಳನ್ನು ೨೫ವರ್ಷಗಳ ಅವಧಿಯಲ್ಲಿ ನಿರ್ಮಾಣಕ್ಕೆ ಶಿಫಾರಸು ಮಾಡುತ್ತದೆ. ೧೯೮೮ – ಪ್ರಯಾಣಿಕ ರೈಲು ಹಳಿಗಳ ಅಭಿವೃದ್ಧಿ ಪಡಿಸಬೇಕೆಂಬ ವರದಿಯನ್ನು ರೈಟ್ಸ್ ಸಂಸ್ಥೆ ನೀಡಿತು. ೧೯೯೩ – ದಕ್ಷಿಣ ರೈಲ್ವೆಯ ೧೯೮೩ ಯ ಶಿಫಾರಸಿನಂತ ತ್ವರಿತ ಸಮೂಹ ಸಾರಿಗೆಯ ವರ್ತುಲ ರೈಲು ನಿರ್ಮಾಣಕ್ಕೆ ರಾಜ್ಯ ಸರಕಾರ ಸಮಿತಿಯನ್ನು ನೇಮಿಸುತ್ತದೆ. ೧೯೯೮ – ವಿಶ್ವ ಬ್ಯಾಂಕ್ ನೆರವಿನೊಂದಿಗೆ ಸ್ಥಳೀಯ ರೈಲು ಸೇವೆಗೆ ರೈಟ್ಸ್ ಸಂಸ್ಥೆ ಸರ್ವೇ ಕಾರಯ ಕೈಗೊಳ್ಳುತ್ತದೆ. ೨೦೦೩ – ಸ್ಥಳೀಯ ರೈಲು ಸೇವೆಯ ಸರ್ವೇ ಕಾರ್ಯವನ್ನು ರೈಟ್ಸ್ ಸಂಸ್ಥೆ ಸಲ್ಲಿಸುತ್ತದೆ. ೨೦೦೭ – ರೈಟ್ಸ್ ಸರ್ವೇ ಕಾರ್ಯವನ್ನು ಸಿಟಿಟಿಪಿ೨೦೦೭ರ ಭಾಗವಾಗಿ, ಪ್ರಯಾಣಿಕ ರೈಲು ಸೇವೆಯನ್ನು ಬೆಂಗಳೂರಿನ ಸುತ್ತಮುತ್ತಲಿನ ಪಟ್ಟಣಗಳನ್ನು ಸಂಪರ್ಕಿಸಲು ವ್ಯಾಪಕವಾಗಿ ಬಳಸಬೇಕೆಂದು ಶಿಫಾರಸ್ಸು ಮಾಡುತ್ತದೆ. ಜನವರಿ ೨೦೦೮ – ಮೂಲ ಸೌಕರ್ಯ ನಿರ್ದೇಶನಾಲಯ ಎರಡು ಡೀಸಲ್ ಯಂತ್ರ ಬಹು ಘಟಕ (ಡೆಮು) ಸೇವೆಯನ್ನು ಆರಂಭಿಸಲು ಹಣಕಾಸಿನ ನೆರವು ನೀಡಲು ಒಪ್ಪುತ್ತದೆ. ನವೆಂಬರ ೨೦೦೯ – ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರ ಪ್ರಯಾಣಿಕರ ರೈಲಿನ ಅಧ್ಯಯನವನ್ನು ಮೂಲ ಸೌಕರ್ಯ ನಿರ್ದೇಶನಾಲಯಕ್ಕೆ ವಹಿಸುತ್ತದೆ. ೧೪ ಡಿಸೆಂಬರ ೨೦೦೯ – ನೈಋತ್ಯ ರೈಲ್ವೆಯು ಆನೇಕಲ್/ದೇವನಹಳ್ಳಿ, ಕೆಂಗೇರಿಗೆ ಉಪನಗರ ರೈಲು ಪ್ರಾರಂಭಿಸಲು ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಒಪ್ಪಿಗೆ ಸೂಚಿಸುತ್ತದೆ. ಡಿಸೆಂಬರ ೨೦೦೯ – ರಾಜ್ಯದ ರೈಲ್ವೆ ಸಚಿವರಾದ ಕೆ ಹೆಚ್ ಮುನಿಯಪ್ಪನವರು ರಾಜ್ಯ ಸರ್ಕಾರ ಉಪನಗರ ರೈಲಿನಬಗ್ಗೆ ಯಾವುದೇ ನಿರ್ಧಾರ ಪ್ರಕಟಿಸಲ್ಲವೆಂದು ತಿಳಿಸುತ್ತಾರೆ. ೨ ಜನವರಿ ೨೦೧೦ – ರಾಜ್ಯದ ರೈಲ್ವೆ ಸಚಿವರಾದ ಕೆ ಹೆಚ್ ಮುನಿಯಪ್ಪನವರು ಯಶವಂತಪುರದಿಂದ ಆನೇಕಲ್ ಮತ್ತು ದೇವನಹಳ್ಳಿಗೆ ಉಪನಗರ ರೈಲುಗಳನ್ನು ಘೋಶಿಸುತ್ತಾರೆ. ಫೆಬ್ರವರಿ – ಬೆಂಗಳೂರು ದಕ್ಷಿಣದ ಶಾಸಕರಾದ ಹೆಚ್ ಎನ್ ಅನಂತ ಕುಮಾರ್ ರವರು ರೈಲ್ವೆ ಸಚಿವರನ್ನು ಮುಂಬಯಿ ಮಾದರಿಯಲ್ಲಿ ಉಪನಗರ ರೈಲು ಪ್ರಾರಂಭಿಸಬೇಕೆಂದು ಮನವಿ ಮಾಡುತ್ತಾರೆ. ೩ ಮಾರ್ಚ ೨೦೧೦ – ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ರೈಲ್ವೆ ಮಂತ್ರಿಗಳಿಗೆ ಶೇಕಡ ೫೦ರ ರಾಜ್ಯದ ಪಾಲುದಾರಿಕೆಯಲ್ಲಿ ಉಪನಗರ ರೈಲು ಪ್ರಾರಂಭಿಸಬೇಕೆಂದು ಪತ್ರ ಬರೆಯುತ್ತಾರೆ. ಮಾರ್ಚ ೨೦೧೩ - "ಬೆಂಗಳೂರು ಉಪನಗರ ರೈಲು ಸಂಸ್ಥೆ ನಿಯಮಿತ" ಸಂಸ್ಥೆ ನೊಂದಾಯಿಸಲಾಯಿತು. ೩೦ ಏಪ್ರಿಲ್, ೨೦೧೩ - ಯಶವಂತಪುರ ಮತ್ತು ನೆಲಮಂಗಲದ ನಡುವೆ ರೈಲು ಸಂಚಾರ ಪ್ರಾರಂಭವಾಯಿತು. == ಪ್ರಯಾಣ ದರ == == ಪ್ರಸ್ತುತ ರೈಲುಗಳು == ಮಿಂಚು (ವಿದ್ಯುತ್) ಬಂಡಿಗಳು: ಬೆಂಗಳೂರು ನಗರ - ರಾಮನಗರ ಬೆಂಗಳೂರು ನಗರ - ಮಾರಿ ಕುಪ್ಪೆ ಡೀಸಲ್ ಬಂಡಿಗಳು: ಬೆಂಗಳೂರು ದಂಡು - ಬಂಗಾರಪೇಟೆ ಬೆಂಗಳೂರು ನಗರ - ಚಿಕ್ಕಬಳ್ಳಾಪುರ ಯಶವಂತಪುರ - ತುಮಕೂರು ಯಶವಂತಪುರ - ಚಿಕ್ಕಬಳ್ಳಾಪುರ ಯಶವಂತಪುರ - ನೆಲಮಂಗಲ ಯಶವಂತಪುರ - ಹೊಸೂರು == ಹೊಸ ಮಾರ್ಗಗಳು == ಬೆಂಗಳೂರಿನ ಸುತ್ತಮುತ್ತ ಸರ್ವೇ ಕಾರ್ಯ ಮುಗಿದಿರುವ ಹೊಸ ಹಳಿಬಂಡಿ ಮಾರ್ಗಗಳು ಮುಂದಿನ ದಿನಗಳಲ್ಲಿ ಉಪನಗರ ರೈಲು ಸೇವೆಗೆ ಸಹಕಾರಿಯಾಗಲಿದ್ದು, ಆ ಮಾರ್ಗಗಳ ಪಟ್ಟಿ ಕೆಳಗಿನಂತಿದೆ. ಹೆಜ್ಜಾಲ - ಕನಕಪುರ ಬಿಡದಿ – ಆನೇಕಲ್ ವೈಟ್‌ಫೀಲ್ಡ್ - ಕೋಲಾರ ನೆಲಮಂಗಲ - ಕುಣಿಗಲ್ ಕುಣಿಗಲ್ - ತುಮಕೂರು ತುಮಕೂರು - ಮಧುಗಿರಿ ಮಧುಗಿರಿ - ಗೌರಿಬಿದನೂರು ಗೌರಿಬಿದನೂರು - ಚಿಕ್ಕಬಳ್ಳಾಪುರ == ನಿಲ್ದಾಣಗಳು == == ಉಲ್ಲೇಖಗಳು ==